ಸ್ವರಚಿತ ಛಂದಸ್ಸಿನ ಹಾಡುಗಳು
ಲಘು-ಗುರು-ಪ್ಲುತ ಸ್ವರೂಪ
(ನನ್ನ ನೀನು ನಿನ್ನ ನಾನು ಹಾಡಿನ ರಾಗ)
ನಾನು ಲಘುವೂ ನೀನು ಗುರುವೂ
ಅವನು ಪ್ಲುತವೂ ಮಾತ್ರಾರೂಪವು
ಛಂದೋ ರೂಪಗಳೇ ನಾವೇ ಕಣವ್ವೋ
ನಮ್ಮ ರೂಪವಾ ಹೇಳ್ತಾನೆ ಮಗುವು
||ನಾನು||
ಕುದುರೆ ಲಾಳದಂತೆ ನಿನ್ನ ರೂಪವು
ಒಂದು ಹ್ರಸ್ವ ಉಚ್ಚರಿಸೋ ಕಾಲ ಮಾತ್ರವು
ಒಂದು ಮಾತ್ರೆಯೂ ನಿನ್ನ ಬೆಲೆಯೂ
ನಿನ್ನ ಹೆಸರೇ ಲಘುವು ಕಾಣಯ್ಯೋ
||ನಾನು||
ಅಡ್ಡಪಟ್ಟೆಯಂತೆ ನಿನ್ನ ರೂಪವು
ಒಂದು ದೀರ್ಘ ಉಚ್ಚರಿಸೋ ಕಾಲಮಾತ್ರವು
ಎರಡು ಮಾತ್ರೆಯೂ ನಿನ್ನ ಬೆಲೆಯೂ
ನಿನ್ನ ಹೆಸರೇ ಗುರುವು ಕಾಣಯ್ಯೋ
||ನಾನು||
ಹಕ್ಕಿಕೊಕ್ಕೆಯಂತೆ ನಿನ್ನ ರೂಪವು
ದೀರ್ಘಕ್ಕೂ ದೀರ್ಘವು ಕಾಲಮಾತ್ರವು
ಮೂರು ಮಾತ್ರೆಯು ನಿನ್ನ ಬೆಲೆಯೂ
ನಿನ್ನ ಹೆಸರೇ ಪ್ಲುತವು ಕಾಣಯ್ಯೋ
||ನಾನು||
No comments:
Post a Comment