Saturday 17 January 2015

ಗುರು ನಮನ

ಜ್ಞಾನವೇ ಜಗದಲ್ಲಿ ಶ್ರೇಷ್ಠತಮ
ಜ್ಞಾನ ನೀಡೋ ಗುರುವೇ ಸರ್ವೋತ್ತಮ
ಮೌಢ್ಯಾಂಧಕಾರವೆಂಬೋ ಅಜ್ಞಾನತಮ
ತೊಡೆಯುವ ಗುರುವೇ ಜ್ಯೋತಿರ್ಗಮ|| ಜ್ಞಾನ||

ಅನುಭವಗಳ ಸವಿಯು ಹೃದಯಂಗಮ
ಅದ ನೀಡೋ ಗುರು ಮಂದಿರವೇ ಜ್ಞಾನಸಂಗಮ
ದಿವ್ಯ ಭವ್ಯ ಚೇತನಗಳ ಸೃಷ್ಟ ಉಗಮ
ಕಾರಣಿಕ ಗುರುವೇ ಪುರುಷೋತ್ತಮ ||ಜ್ಞಾನ||

ಕಲಿಕೆಯ ಹಾದಿಯು ಬಲು ಕಠಿಣತಮ
ಮಾರ್ಗಕಾರ ಗುರುವಿರಲು ಹಾದಿ ಸುಗಮ
ವಿದ್ಯಾದಾನ ಶ್ರೇಷ್ಠದಾನ ಉತ್ತಮೋತ್ತಮ
ಅದ ನೀಡೋ ಶಿಕ್ಷಕನಿಗೆ ದೀರ್ಘ ಪ್ರಣಾಮ ||ಜ್ಞಾನ||