ಸ್ವರಚಿತ ಛಂಧೋಹಾಡುಗಳು
ತ್ರಿಪದಿ
(ಮೂರು ಕಣ್ಣಿನ ಮುಗಿಲು ಬಣ್ಣದ)
ಮೂರು ಸಾಲಿನ ಈ ಪದ್ಯವು ತ್ರಿಪದಿ ನೋಡಯ್ಯಾ
ಅಂಶದ ಲಯದಾ ಚಂದದ ಪದ್ಯವಾ ನೀನು
ನೋಡಯ್ಯಾ
ನೀನು ನೋಡಯ್ಯಾ||ಮೂರು||
ಬ್ರಹ್ಮ ವಿಷ್ಣು ಇಬ್ಬರು ಇಲ್ಲಿ ಬರುವರು
ನೋಡಯ್ಯಾ
ಒಮ್ಮೊಮ್ಮೆ ರುದ್ರನು ಕಾಣಿಸಿಕೊಳುವನು ತ್ರಿಪದಿಯ
ಲಯವಯ್ಯಾ ||ಮೂರು||
ಏಕಾದಶ ಗಣವು ಇಲ್ಲಿ ಬರುತದೆ ನೋಡಯ್ಯ
ಎಲ್ಲವೂ ಇಲ್ಲೆ ಅಂಶ ಗಣವಾಗಿ ನಿಲುವುದು
ಇಲ್ಲಿ ನೋಡಯ್ಯಾ ಇಲ್ಲಿ ನೋಡಯ್ಯಾ||ಮೂರು||
ಆರು ಹತ್ತನೇ ಸ್ಥಾನದಲ್ಲಿ ಬ್ರಹ್ಮ
ಬರುವನಯ್ಯಾ
ಉಳಿದ ಸ್ಥಾನದಲ್ಲಿ ವಿಷ್ಣು ಕೂರುವನಯ್ಯಾ
ವಿಷ್ಣು ಕೂರುವನಯ್ಯಾ||ಮೂರು||
ಆರನೇ ಗಣದ ಅಂತ್ಯದಲ್ಲಿ ಯತಿಯು
ಬರ್ತಾನಯ್ಯಾ
ಅಂಶದ ಲಯಕೆ ವಿಶ್ರಾಮ ನೀಡುವ ಮತಿಯೂ
ಇವನದಯ್ಯಾ||ಮೂರು||
ಆರು – ಹತ್ತನೇ ಸ್ಥಾನದಲ್ಲಿ
ಜಗಣವು ನಿಯತವಯ್ಯಾ
ಜಗಣವು ಬರದೇ ಇದ್ದರೆ, ಸರ್ವಲಘುವು
ಬರುತಯ್ಯಾ||ಮೂರು||
No comments:
Post a Comment