ಸ್ವರಚಿತ ವ್ಯಾಕರಣದ ಹಾಡುಗಳು
ವಚನಗಳು
ದೊಡ್ಡಯ್ಯಹೇಳ್ ಚಿಕ್ಕಯ್ಯ
ಚಿಕ್ಕಯ್ ಹೇಳ್ ದೊಡ್ಡಯ್ಯ
ವಚನವೊಂದ್ ಹೇಳೋ ನೀನು
ವೋ ವೋ ಹೋ ವಚನಾವೊಂದ್ಹೇಳೊ ನೀನು ||1||
ವ್ಯಕ್ತಿ, ವಸ್ತು, ಪ್ರಾಣಿ ಪಕ್ಷಿ
ಸಂಖ್ಯೆಗಳನು ಹೇಳೋ ಪದವಾ
ವಚನಾಯೆಂದ್ ಕರೆಯುತವ್ರೇ
ವೋ ವೋ ವೋ ವಚನಾಯೆಂದ್ ಕರೆಯುತವ್ರೇ||2||
ಏಕವಚನ, ಬಹುವಚನ
ಎಂಬೆರಡು ವಿಧಗಳು
ವಚನದಲ್ಲಿರುತೈತೆ
ವೋ ವೋ ಹೋ ವಚನದಲ್ಲಿರುತ್ತೈತೆ ||3||
ಒಬ್ಬ ವ್ಯಕ್ತಿ, ಒಂದು ವಸ್ತು, ಒಂದು
ಪ್ರಾಣಿ ಒಂದು ಪಕ್ಷಿ
ಎಂದ್ಹೇಳೋ ಪದವು
ಏಕವಚನವಾಗುತೈತೆ
ವೋ ವೋ ಹೋ ಏಕವಚನವಾಗುತೈತೆ ||4||
ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತು,
ಪ್ರಾಣಿ, ಪಕ್ಷಿ
ಎಂದ್ಹೇಳೋ ಪದವು
ಬಹುವಚನವಾಗುತೈತೆ
ವೋ ವೋ ಹೋ ಬಹುವಚನವಾಗುತೈತೆ ||5||
‘ಅ’ಕಾರಾಂತವಲ್ಲದ ಸ್ತ್ರಿಲಿಂಗ,
ಪುಲ್ಲಿಂಗ
ಪ್ರಕೃತಿಗಳಿಗೆ
‘ಗಳು’ ಬಂದ್ ಸೇರುತೈತೆ
ವೋ ವೋ ಹೋ ಬಹುವಚನವಾಗುತೈತೆ ||6||
ಏಕವಚನ ಸ್ತ್ರೀಲಿಂಗ ಶಬ್ಧಗಳ ಕೊನೆಯಲ್ಲಿ
‘ಯರು’ ಬಂದ್ ಸೇರುತೈತೆ
ವೋ ವೋ ಹೋ ಬಹುವಚನವಾಗುತೈತೆ ||7||
ಏಕಪುಚನ ಪುಲ್ಲಿಂಗ ಶಬ್ಧಗಳ ಮೇಲೆ
‘ಅರು’ ಬಂದ್ ಸೇರುತೈತೆ
ವೋ ವೋ ಹೋ ಬಹುವಚನವಾಗುತೈತೆ ||8||
ಸಪುಂಸಕಲಿಂಗ ಪ್ರಕೃತಿಗಳಿಗೆ
‘ಗಳು’ ಬಂದ್ ಸೇರುತೈತೆ
ವೋ ವೋ ಹೋ ಬಹುವಚನವಾಗುತೈತೆ ||9||
ಗೌರವ ಸೂಚಕವಾಗಿ
‘ಅರು’, ‘ಅವರು’ ಪ್ರತ್ಯಯಗಳು ಎರಡೆರಡೂ
ಸೇರುತೈತೆ
ವೋ ವೋ ಹೋ ಬಹುವಚನವಾಗುತೈತೆ ||10||
ರೂಢನಾಮ ಶಬ್ಧಗಳಿಗೆ
‘ಗಳು’ ಪ್ರತ್ಯಯ ಸೇರಿದಾಗ
ಬಹುವಚನವಾಗುತೈತೆ
ವೋ ವೋ ಹೋ ಬಹುವಚನವಾಗುತೈತೆ ||11||
ನಿಂದನೆ, ವ್ಯಂಗವಾಡೋ ಪದಗಳಿಗೆ
‘ಅರು’ ಬಂದ್ ಸೇರುತೈತೆ
ಬಹುವಚನವಾಗುತೈತೆ
ವೋ ವೋ ಹೋ ಬಹುವಚನವಾಗುತೈತೆ ||12||
ಮೂರು ಲಿಂಗದ್ ಪದಗಳಿಗೂ
ಒಂದೇ ರೂಪದಲ್ಲಿ
ಬಹುವಚನ ಬರುತೈತೆ
ವೋ ವೋ ಹೋ ಬಹುವಚನವಾಗುತೈತೆ ||13||
ಬಗೆಬಗೆಯ ರೂಪದಲ್ಲಿ
ಏಕವಚನ ಕಳೆದು
ಬಹುವಚನ ಬರುತೈತೆ
ವೋ ವೋ ಹೋ ಬಹುವಚನವಾಗುತೈತೆ ||13||
No comments:
Post a Comment