Sunday 26 February 2017

ರಸಗನ್ನಡ ವ್ಯಾಕರಣ


ಕನ್ನಡ ಕಾಲ (ಯಾರು ಯಾರು ನೀ ಯಾರು - ಚಲನಚಿತ್ರ ಗೀತೆ ಧಾಟಿ) ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು?||2| ಇದು ವರ್ತಮಾನ ನೀ ಯಾರು ಹೇಳು?||2|| ನಿನ್ ರೂಪ ನನಗೆ ತೋರು ||ಯಾರು|| ಭೂತಕಾಲ ನಾನಯ್ಯ ಕಳೆದು ಹೋದ ಕಾಲವಯ್ಯ ||2| ಯಾವ ಭೂತವೋ? ಯಾವ ಕಾಲವೋ||2|| ರೂಪವಿಲ್ಲದಾ ಪಿಶಾಚಿಯೋ? ಅಯ್ಯೋ! ಧಾತು ಮೇಲೆ 'ದ' ಸೇರ್ಸು ನನ್ನ ರೂಪ ನೋಡು ||ಯಾರು|| ಯಾರು ಯಾರು ನೀ ಯಾರು? ಭೂತವಲ್ಲ ನೀ ಯಾರು?||2| ಇದು ವರ್ತಮಾನ ನೀ ಯಾರು ಹೇಳು||2|| ನಿನ್ ರೂಪ ನನಗೆ ತೋರು !||ಯಾರು|| ಭವಿಷ್ಯ ಕಾಲ ನಾನಯ್ಯ ಮುಂದಾಗೋ ಕ್ರಿಯೆ ಹೇಳುವೆನಯ್ಯಾ!||2| ಯಾವ ಭವಿಷ್ಯವೋ? ಯಾವ ಕಾಲವೋ! ||2|| ರೂಪವಿಲ್ಲದಾ ದೇಹವೋ? ಅಯ್ಯೋ!ಧಾತು ಮೇಲೆ 'ವ' ಸೇರ್ಸು ನನ್ನ ರೂಪ ನೋಡು!||ಯಾರು|| ಯಾರು ಯಾರು ನೀ ಯಾರು? ಭೂತ ಭವಿಷ್ಯವಲ್ಲ ನೀ ಯಾರು ||2|| ನಾವ್ ನಮ್ಮ ರೂಪ ನಿನ್ಗೆ ತೋರ್ಸಿ ಆಯ್ತು||2|| ನೀ ನಿನ್ನ ರೂಪ ತೋರು||ಯಾರು|| ವರ್ತಮಾನ ನಾನಯ್ಯಾ| ನಡೆವ ಕ್ರಿಯೆಯ ಹೇಳುವೆನಯ್ಯಾ ||2| ವರ್ತಮಾನವೋ? ನಡೆವ ಕ್ರಿಯೆಯೋ||2|| ರೂಪವಿಲ್ಲದಾ ದೇಹವೋ? ಅಯ್ಯೋ! ಧಾತು ಮೇಲೆ 'ಉತ್ತ' ಸೇರ್ಸು ನೀ ನನ್ನ ರೂಪ ನೋಡು ||ಯಾರು|| ಯಾರು ಎಂಬುದೂ ಗೊತ್ತೇ? ನಾವ್ ಯಾರು ಎಂಬುದೂ ಗೊತ್ತೇ?||2|| ಭೂತ, ಭವಿಷ್ಯ ವರ್ತಮಾಲ ಕಾಲ ||2|| ಸೂಚಕವು ನಾವು ಗೊತ್ತೇ||ಯಾರು||

No comments:

Post a Comment