Thursday 16 April 2020



ಕನ್ನಡ ಭಾಷಾ ಶಿಕ್ಷಕ
(ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ ರಾಗ)
ಭಾರತ ದೇಶವ ನಿರ್ಮಿಪ ಬೋಧಕ
ಭಾಷಾ ಶಿಕ್ಷಕ ನೀನಾಗು
ಕನ್ನಡ ಭಾಷೆಯ ಗುರುವಾಗು
ಸದ್ಗುಣಗಳ ಗಣಿಯಾಗು ||ಭಾರತ||

ಪ್ರಗತಿಪರ ಚಿಂತನೆ ಭಾವವ
ಹೊಂದಿದ ಜ್ಞಾನಿಯು ನೀನಾಗು
ಬೋಧನೆ, ಕಲಿಕೆ ಸಾಧನೆಯಲ್ಲಿ ಪ್ರಗತಿಯ ಭಾವವ ನೀ ತೋರು
ಹೊಸ ಬೆಳವಣಿಗೆಯ, ಸಂಶೋಧನೆಗಳ ಪೋಷಿಪ ವಿಜ್ಞಾನಿ ನೀನಾಗು ||ಭಾರತ||

ಹಿತಮಿತ ಮಾತನು ಆಡುತ ಬೋಧಿಪ
ಒಲುಮೆಯ ಮೃದು ಮಾತಗಾರನಾಗು
ಭಾಷೆಯ ಮೇಲೆ ಪ್ರೇಮವ ಕನ್ನಡಾಭಿಮಾನಿಯು ನೀನಾಗು
ಕತೆ, ಕಾವ್ಯ, ಕವನ ಒಲುಮೆಯ ಹೊಂದಿಪ
ಸಾಹಿತ್ಯ ಪ್ರೇಮಿಯು ನೀನಾಗು ||ಭಾರತ||

ಸಮಾಜ ಸೇವೆಯ ಇಚ್ಛೆಯ ಉಳ್ಳವ
ಸಮಾಜ ಪ್ರೇಮಿಯು ನೀನಾಗು
ಸಮಾಜ ಶಾಲೆಯ ಬಂಧಿಪ ಕಾರ್ಯದ  ಏರ್ಪಾಡುಗಾರನು ನೀನಾಗು
ಕಲಾವಿದರನು ಪೋಷಿಪ ಪೋಷಿಕ ಪೋಷಕ, ಸಮಾಜಸೇವಕ ನೀನಾಗು ||ಭಾರತ||

ಜನನೀ ಜನ್ಮಭೂಮಿಯ ಸೇವಿಪ
ದೇಶಪ್ರೇಮಿಯು ನೀನಾಗು
ದೇಶಪ್ರೇಮವಾ ಪೋಷಿಪ ಕಾರ್ಯವ ಯೋಜಿಪ ಯೋಜಕ ನೀನಾಗು
ಸೌಹಾರ್ದತೆಯಾ ಬೆಳೆಸುವ ಕಾರ್ಯದ ದೇಶಾಭಿಮಾನಿಯು ನೀನಾಗು ||ಭಾರತ||

2 comments:

  1. ನಿಮ್ಮ ಬ್ಲಾಗಲ್ಲಿ ಬಹುಳಷ್ಟು ಓದುವುದಿದೆ. ಛಂದಸ್ಸಿನ ವಿಷಯವೆಲ್ಲ ಹಾಡುಗಳಾಗಿ ಒದುಗಿಸಿ ತುಂಬಾ ಚೆನ್ನಾಗಿ ಬರದಿದ್ದೀರಿ.

    ReplyDelete
    Replies
    1. ಧನ್ಯವಾದಗಳು ಮ್ಯಾಮ್

      Delete