Monday, 19 March 2018
'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ'ಗೆ ನನ್ನದೊಂದು ಕಿರುಕಾಣಿಕೆ.
ಸ್ತ್ರೀಶಕ್ತಿ
ಮನುಕುಲದ ಮಹಾಶಕ್ತಿಯೇ ಸ್ತ್ರೀಶಕ್ತಿಯೇ ನಾರೀ
ಅನುಗಾಲವು ಸೇವಿಸುವ ಮನುಕುಲದ ರುವಾರಿ
ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!.............
ಜನನೀ ಜನ್ಮಭೂಮಿ ನುಡಿಜಲವು ನೀ ತಾಯೇ
ವಾತ್ಸಲ್ಯದಾಯಿನೀ ಪ್ರೇಮದಾತೆ ಮಾಯೇ
ಅನುಬಂಧ ಸೃಜಿಸುವ ಸಮ್ಮೋಹ ಶಕ್ತಿಯೇ
ಮನುಕುಲದ ಮಕುಟಮಣಿ ಕುಲದಾದಿ ಮಾತೆಯೇ
ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!.............
ನಾರಿಗುಣ ಶಿರೋಮಣಿ ಸ್ನೇಹದಾತೆ ರಮಣಿ
ಜೀವಕಣದ ಬಳುವಳಿಯಾ ನೀಡೋ ತ್ಯಾಗರೂಪಿಣಿ
ಅಣು ಅಣುವೂ ಕಣಕಣವೂ ಸ್ನೇಹಮಿಡಿಯೋ ಹೃದಯಮಣಿ
ಕ್ಷಣಕ್ಷಣಕೂ ಬೆಳಕಾಗೋ ಸೃಜನಶೀಲ ಜ್ಞಾನವಾಣಿ
ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!.............
ಸಾಧನೆಯಾ ಹಾದಿ ನೀನೇ ನುಡಿಗೀತೆವಾಣಿ
ಕ್ರೀಡಾವಿನೋದದಿ ಸಾಧನೆಯ ಹೊಂಗಣಿ
ಸಂಶೋಧನೆ ಪ್ರಗತಿನೋಟ ಬೀರೋತಂತ್ರ ವಿಜ್ಞಾನಿ
ದೇಶಕಾಗಿ ಪ್ರಾಣತ್ಯಜಿಸೋ ನಾರಿಯೇ ವೀರಾಘ್ರಣಿ
ಸ್ತ್ರೀ ಶಕ್ತಿಯೇ!................ ಮಹಾಶಕ್ತಿಯೇ!.............
(ಪದಸಾ ಸರಿಗ ರಿಗಮನಿದನಿಪಾ
ದಪಗಾ ಮಗರಿ ದದದನಿದನಿಪಾ
ದದದನಿದನಿಪಾ.....
ಪದಸಾ............ ಪದಸಾ........)
Subscribe to:
Post Comments (Atom)
This comment has been removed by a blog administrator.
ReplyDelete